ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.
ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.
ಹಳೆಯ ಗಾದೆ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ.
ಹೊಸ ರೂಪ: ಮನಮೋಹನ ವರ ಕೊಟ್ಟರೂ ಸೋನಿಯಾ ಕೊಡಲಿಲ್ಲ!
ಹಳೆಯ ಗಾದೆ: ಹುಚ್ಚನ ಮದುವೇಲಿ ಉಂಡೋನೇ ಜಾಣ.
ಹೊಸ ರೂಪ: ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಪದವಿ ಗಿಟ್ಟಿಸಿದೋನೇ ಜಾಣ.
ಹಳೆಯ ಗಾದೆ: ಮಳ್ಳಿ ಮಳ್ಳಿ, ಮಂಚಕ್ಕೆಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅಂದಳಂತೆ.
ಹೊಸ ರೂಪ: ಪುಢಾರಿ ಪುಢಾರಿ, ನಿನ್ನ ಸ್ವಿಸ್ ಬ್ಯಾಂಕಲ್ಲಿರೋ ಹಣ ಎಷ್ಟು ಅಂದ್ರೆ ಮೂರು ಮತ್ತೊಂದು (ಕೋಟಿ) ಅಂದನಂತೆ!
ಹಳೆಯ ಗಾದೆ: ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ..... ಚಿಂತೆಯಂತೆ.
ಹೊಸ ರೂಪ: ಪ್ರಜೆಗಳಿಗೆ ದೇಶದ ಚಿಂತೆಯಾದರೆ ಪ್ರಭುಗಳಿಗೆ ಕುರ್ಚಿಯ ಚಿಂತೆಯಂತೆ.
ಹಳೆಯ ಗಾದೆ: ಗಾಳಿ ಬಂದಾಗ ತೂರಿಕೋ.
ಹೊಸ ರೂಪ: ಪದವಿ ಇದ್ದಾಗ ಸರಿಯಾಗಿ (ದುಡ್ಡು) ಬಾಚಿಕೋ.
ಹಳೆಯ ಗಾದೆ: ಕೋಣನಿಗೇನು ಗೊತ್ತು ಕಸ್ತೂರೀ ಗಂಧ?
ಹೊಸ ರೂಪ: ನಿಯತ್ತಿರುವವನಿಗೇನು ಗೊತ್ತು ಗಿಂಬಳದ ಗಂಧ?
ಹಳೆಯ ಗಾದೆ: ಮಾತು ಬಲ್ಲವನಿಗೆ ಜಗಳವಿಲ್ಲ.
ಹೊಸ ರೂಪ: ಪಕ್ಷಾಂತರ ಬಲ್ಲವನಿಗೆ ಕುರ್ಚಿಯ ಚಿಂತೆಯಿಲ್ಲ.
ಹಳೆಯ ಗಾದೆ: ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.
ಹೊಸ ರೂಪ: ಕಪ್ಪು ಹಣಕ್ಕೆ ತೆರಿಗೆ ಹಾಕಿದಂತೆ!
ಹಳೆಯ ಗಾದೆ: ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ.
ಹೊಸ ರೂಪ: ಚುನಾವಣಾ ಸಮಯದಲ್ಲಿ ಭಾಷಣ ಉರು ಹೊಡೆದಂತೆ.
(ಬರೆದದ್ದು: ೦೩-ಜನವರಿ-೨೦೦೭)
Monday, March 12, 2007
Subscribe to:
Post Comments (Atom)
8 comments:
sogasaada gaadhegaLu...
nanu yaaru anta nimage gottu anisutte..
ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.
ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.
ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.
ಅವರ ಕೆಲವು ಮಾತುಗಳು ಹೀಗಿದ್ದವು -
"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."
ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/
http://www.karnatakarakshanavedike.org/app/webroot/files/samaavesha_varadi.pdf
೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ
ಕದ ತಿನ್ನೋನಿಗೆ ಹಪ್ಳ ಈಡೆ ಅನ್ನೊ ಗಾದೆ, ಹೀಗೂ ಹೇಳಬಹುದೆ ? ಕೋಟಿಗಟ್ಳೆ ನಕಲಿ ಸ್ಟಾಂಪ್ ಮಾಡಿ, ಮಾರ್ದೊನ್ಗೆ, ಒಂದ್ನೂರ್ ರುಪಾಯಿ ನೋಟ್ ಲೆಕ್ಕವೇ
ಒಳ್ಳೆಯ ಸಂಮಿಶ್ರ ಗಾದೆಗಳು . . . .
ಎತ್ತಿಗೆ ಕಾಯ್ಲೆ ಆದ್ರೆ ಎಮ್ಮೆಗೆ ಬರೆಹಾಕಿದ್ರು.
ಇದನ್ನು ನಾವು, ದ್ಯಾವೆಗೌಡ್ರಿಗೆ ಕೈಗ್ ಬಂದ್ ತುತ್ತು ಕೆಳಗ್ಬಿದ್ದೊದ್ರೆ, ಪಾಪ , ಎಮ್. ಪಿ. ಪ್ರಕಾಶ್ ನ ಯಾಕ್ [ಸ್ಕೇಪ್ ಗೋಟ್ ]ಬಕ್ರ ಮಾಡಿದ್ರು ?
ಸ್ವಾರಸ್ಯವಾಗಿವೆ ಗಾದೆಗಳು
ನಮಸ್ತೇ ಶ್ಯಾಮ್ ಕಿಶೋರ್,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಶ್ರೀನಿಧಿ.ಡಿ.ಎಸ್.
tumba sogasagive gaademaatugalu
Post a Comment